ಮಾಯೆ....
ಇದು ಮಾಯ, ಅದು ಮಾಯೆ ಎಲ್ಲವೂ
ಮಾಯಾಲೋಕವಿದು..
ಅರಿತಷ್ಟು ಹಾಳ ಇದು..
ಮರೆತಸ್ಟು ಮತ್ತೆ ಮತ್ತೆ ನೆನಪಿಗೆ ಬರುವ
ಪ್ರೇಮದ ಅಂತರಾಳ ಇದು ..
ಕವಿಯ ಮನಸಿಗೆ ಹುಚ್ಚು ಹಿಡಿಸುವ
ಹೊಸ ಸಂಚಿನ ವಿನೂತನ ಮಾಯೆ ಇದು..
ಕಣ್ಣಿಗೆ ಕಾಣದ ಕೈಗೆ ಎಟುಕದ
ನೋವಿನ ನಿಲುವ ತಾಣ ಇದು...
ಮೌನೇಶ್ವರಿ
Comments
Post a Comment